Monday, 25 July 2011

ಎಲ್ಲರಿಗು ಹೃದಯ ಪೂರ್ವಕ ವಂದನೆಗಳು

ನಮಸ್ಕಾರ ಸ್ನೇಹಿತರೆ

ಈ ಭಾನುವಾರ ನಡೆದ ನಮ್ಮ ಕಾಮಧೇನು ಸಮುದಾಯದ ಮಲ್ಲಿಗೆರೆ
ಶಾಲೆಯಲ್ಲಿ ನಡೆದ ಅಕ್ಷರ ಬೆಳಕು ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಎಲ್ಲರ
ಮನಪೂರ್ವಕ ಆಶೀರ್ವಾದ, ಹಾರೈಕೆಗಳಿಗೆ ನಾವುಗಳು ಅಭಾರಿ, ನಿಮ್ಮ ಪ್ರೋತ್ಸಾಹ ಹೀಗೆ ಇರಲಿ
ಸದಾ ಕಾಲ. ಭಾಗವಹಿಸಿದ ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ
ನಿರ್ವಹಿಸಿದರು ಎಲ್ಲರಿಗು ಅನಂತ ವಂದನೆಗಳು

ಯಶಸ್ವಿಯಾಗಲು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗು ಹೃದಯ ಪೂರ್ವಕ ವಂದನೆಗಳು


ಇಂತಿ ನಿಮ್ಮ


ಶ್ರೀ ಸಾಯಿ ಕಾಮಧೇನು ಫೌಂಡೆಶನ್

Saturday, 23 July 2011

ದೂರವಾಣಿ ಸಂಖ್ಯೆಯನ್ನು ದಾಖಲಿಸಬೇಕೆಂದು ವಿನಂತಿ

ಎಲ್ಲ ಆತ್ಮೀಯ ಪ್ರೀತಿಯ ಗೆಳಯರಿಗೆ ಶುಭ ಮುಂಜಾನೆ ಶುಭ ದಿನ

ನಮ್ಮ ಸಮುದಾಯದ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ, ಅಂದರೆ ಜುಲೈ 24 ನೇ ತಾರೀಕು (ನಾಳೆ) ಮಂಡ್ಯ ಜಿಲ್ಲೆಯ ಮಲ್ಲಿಗೆರೆ ಗ್ರಾಮದ ಶಾಲೆಯ ಮಕ್ಕಳಿಗೆ, ನೋಟ್
ಬುಕ್ ಗಳು, ಜಾಮಿಟರಿ ಬಾಕ್ಸ್, ಮತ್ತು ಒಂದೊಂದು ಶಭ್ದ ಕೋಶಗಳನ್ನು (Dictionary)
ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತಿ ಇದ್ದವರು ಮತ್ತು ಈಗಾಗಲೇ ಹೆಸರನ್ನು ದಾಖಲಿಸಿರುವವರು ತಮ್ಮನ್ನು ಸಂಪರ್ಕಿಸಲು ಅನುಕೂಲವಾಗುವಂತೆ ತಮ್ಮ ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನು kamadhenufoundation@gmail.com ಗೆ ಕಳುಹಿಸಬೇಕಾಗಿ ಈ ಮೂಲಕ ಕೋರಲಾಗಿದೆ

ದಯವಿಟ್ಟು ಮರೆಯದೆ ದಾಖಲಿಸಬೇಕೆಂದು ಮತ್ತೊಮ್ಮೆ ವಿನಂತಿ

ಇಂತಿ ನಿಮ್ಮ

ಶ್ರೀ ಸಾಯಿ ಕಾಮಧೇನು ಫೌಂಡೆಶನ್

Wednesday, 13 July 2011

ಮಲ್ಲಿಗೆರೆ ಕಾರ್ಯಕ್ರಮಕ್ಕೆ ಧನ ಸಹಾಯ ಮಾಡಲಿಚ್ಚಿಸುವವರು

ಕಾಮಧೇನು ಫೌಂಡೆಶನ್ ಕಾರ್ಯಕ್ರಮಗಳಿಗೆ ಸಹಾಯ ಮಾಡುವವರು ತಮ್ಮ ಸಹಾಯವನ್ನು ಇಲ್ಲಿ ದಾಖಲಿಸಬೇಕಾಗಿ ವಿನಂತಿ

http://www.orkut.co.in/Main#CommMsgs?cmm=108562828&tid=5628614818854390009&start=1

ನಮ್ಮ ಮುಂದಿನ ಮಲ್ಲಿಗೆರೆ ಕಾರ್ಯಕ್ರಮಕ್ಕೆ ಧನ ಸಹಾಯ ಮಾಡಲಿಚ್ಚಿಸುವವರು ಇಲ್ಲಿ ತಮ್ಮ ಹೆಸರಿನೊಂದಿಗೆ ಕೊಡಲಿಲಿಚ್ಚಿಸುವ ಮೊತ್ತವನ್ನು ಇಲ್ಲಿ ದಾಖಲಿಸಿ

ವಿಶೇಷ
ಸೂಚನೆ - ನಿಮ್ಮ ಹಣ ಸಹಾಯ ಎನ್ನುವುದು ರೂ. ೧ ರಿಂದಲೂ ಶುರುವಾಗಬಹುದು. ಇಷ್ಟೇ ಹಣ
ಕೊಡಬೇಕೆಂಬ ಯಾವುದೇ ಕಡ್ಡಾಯವಿಲ್ಲ, ಹಾಗೆಯೇ ಧನ ಸಹಾಯ ಮಾಡದೆ ಇರುವವರು
ಕಾರ್ಯಕ್ರಮದಲ್ಲಿ ಭಾಗವಹಿಸಬಾರದೆಂಬ ನಿಯಮವಿಲ್ಲ. ತನು- ಮನ ಸಹಾಯವೂ ಸ್ವಾಗತಾರ್ಹ.
ದಯವಿಟ್ಟು ಹೆಚ್ಚಿನ ಸಂಖೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು
ಯಶಸ್ವಿಗೊಲಿಸಬೇಕಾಗಿ ಕೇಳಿಕೊಳ್ಳುತ್ತೇವೆ,

ಇಂತಿ ನಿಮ್ಮ

ಶ್ರೀ ಸಾಯಿ ಕಾಮಧೇನು ಫೌಂಡೆಶನ್

Tuesday, 12 July 2011

ಪ್ರೀತಿಯ ಸ್ನೇಹಿತರೆ ನಿಮ್ಮೆಲ್ಲರ ಗಮನಕ್ಕೆ

ಪ್ರೀತಿಯ ಸ್ನೇಹಿತರೆ ನಿಮ್ಮೆಲ್ಲರ ಗಮನಕ್ಕೆ

ಇದು ಜೂನ್ ತಿಂಗಳು ಆಗಿರುವುದರಿಂದ ಎಲ್ಲಾ ಶಾಲೆಗಳು ಪ್ರಾರಂಭಗೊಂಡಿರುತ್ತವೆ ಆದ ಕಾರಣ ಜುಲೈ ೧೭ ನೇ ತಾರೀಕು ಮಂಡ್ಯ ಜಿಲ್ಲೆಯ ಮಲ್ಲಿಗೆರೆ ಗ್ರಾಮದ ಶಾಲೆಯ ಮಕ್ಕಳಿಗೆ ನೋಟ್ ಬುಕ್ ಗಳು, ಜಾಮಿಟರಿ ಬಾಕ್ಸ್, ಮತ್ತು ಒಂದೊಂದು ಶಭ್ದ ಕೋಶಗಳನ್ನು (Dictionary) , ನೀಡಲು ಯೋಚಿಸಿದ್ದೇವೆ ಆದ ಕಾರಣ ಇದು ನಮ್ಮ ಮಿತ್ರ ವೃಂದದ ಆಲೋಚನೆ ಆದರೂ ಕೂಡ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ,

ಭಾಗವಹಿಸಲು ಇಚ್ಚಿಸುವವರು ಮತ್ತು ದಾನಿಗಳು ಆದಷ್ಟು ಬೇಗ ತಮ್ಮ ಹೆಸರನ್ನು ದಾಖಲಿಸಿ

http://www.orkut.co.in/Main#CommMsgs?cmm=108562828&tid=5626832055239231737&start=1

ಇಂತಿ ನಿಮ್ಮ

ಶ್ರೀಕಾಂತ್ ಎನ್
ಹಾಗು
ಕಾರ್ಯದರ್ಶಿಗಳು
ಶ್ರೀ ಸಾಯಿ ಕಾಮಧೇನು ಫೌಂಡೆಶನ್